Psalms 64

ಸಂರಕ್ಷಣೆಗಾಗಿ ಪ್ರಾರ್ಥನೆ

ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ದಾವೀದನ ಕೀರ್ತನೆ.

1ದೇವರೇ, ನನ್ನ ಸ್ವರವನ್ನು ಕೇಳಿ,
ಶತ್ರುಭಯದಿಂದ ನನ್ನ ಜೀವವನ್ನು ರಕ್ಷಿಸು.
2 ದುಷ್ಟರ ಒಳಸಂಚಿಗೂ, ಕೆಡುಕರ ಗುಪ್ತ ಆಲೋಚನೆಗೂ ಸಿಕ್ಕದಂತೆ,
ನನ್ನನ್ನು ತಪ್ಪಿಸಿ ಭದ್ರಪಡಿಸು.

3

ಅವರು ನಾಲಿಗೆಯೆಂಬ ಕತ್ತಿಯನ್ನು ಮಸೆದಿದ್ದಾರೆ;

ವಿಷವಚನವೆಂಬ ಬಾಣವನ್ನು ಹೂಡಿದ್ದಾರೆ.
4 ಗುಪ್ತಸ್ಥಳಗಳಲ್ಲಿದ್ದು ಸಜ್ಜನನಿಗೆ ಗುರಿಯಿಟ್ಟಿದ್ದಾರೆ.
ಸ್ವಲ್ಪವೂ ಹೆದರದೆ ಅವನ ಮೇಲೆ ಫಕ್ಕನೆ ಎಸೆಯುತ್ತಾರೆ.

5

ದುಷ್ಕೃತ್ಯಕ್ಕಾಗಿ ಮನಸ್ಸನ್ನು ದೃಢಪಡಿಸಿಕೊಂಡು

ತಮ್ಮೊಳಗೆ, <<ರಹಸ್ಯವಾಗಿ ಬಲೆಗಳನ್ನು ಒಡ್ಡೋಣ;
ನಮ್ಮನ್ನು ನೋಡುವವರು ಯಾರು?>> ಅಂದುಕೊಳ್ಳುತ್ತಾರೆ.
6 ಅವರು, <<ಕೇಡನ್ನು ಕಲ್ಪಿಸಿ, ಒಳ್ಳೆಯ ಉಪಾಯವನ್ನು ಕಂಡುಕೊಂಡಿದ್ದೇವೆ>> ಅಂದುಕೊಳ್ಳುತ್ತಾರೆ;
ಅವರ ಹೃದಯವೂ, ಅಂತರಂಗದ ಆಲೋಚನೆಯೂ ಅಶೋಧ್ಯವಾಗಿವೆ.

7

ಆದರೆ ದೇವರು ಬಾಣವನ್ನು ಎಸೆಯಲು,

ಫಕ್ಕನೆ ಅವರಿಗೆ ಗಾಯವಾಗುವುದು.
8 ಅವರ ನಾಲಿಗೆಗಳೇ ಅವರಿಗೆ ವಿಘ್ನವಾಗಿ ಅವರು ಎಡವಿಬೀಳುವರು;
ಆಗ ನೋಡುವವರೆಲ್ಲರು ತಲೆ ಅಲ್ಲಾಡಿಸಿ ಅಣಕಿಸುವರು.
9 ಎಲ್ಲಾ ಮನುಷ್ಯರು ಭಯಪಟ್ಟು ದೇವರ ಕೆಲಸವೆಂದು ಹೇಳಿ,
ಆತನ ಕೃತ್ಯಗಳನ್ನು ಆಲೋಚಿಸಿಕೊಳ್ಳುವರು.

10

ಸದ್ಭಕ್ತರು ಯೆಹೋವನಲ್ಲಿ ಆನಂದಪಟ್ಟು ಆತನನ್ನೇ ಆಶ್ರಯಿಸಿಕೊಳ್ಳುವರು;

ಸರಳಹೃದಯದವರೆಲ್ಲರೂ ಹಿಗ್ಗುವರು.

Copyright information for KanULB